Friday, September 22, 2017

ಬಾಲ್ಯದ ದಿನಗಳಲ್ಲಿ-2


ಪ್ರತಿ ಒಬ್ಬರು ಅವರು ಚಿಕ್ಕೊರಿದ್ದಾಗ ಆಡಿದ ಆಟ, ಓದಿದ ಶಾಲೆ, ಮನೆ ಅತ್ರ ಮಾಡಿದ ಕಿರಿಕ್ ಗಳನ್ನ ಮರೆಯೂದಿಲ್ಲ. ಅದು ಮರೆಯೋಕು ಆಗಲ್ಲ!! ಅವಾಗವಾಗ ಯಾರತ್ರ ನಾದ್ರು,ಯವಾದನ ಟೇಬಲ್ ನಲ್ಲಿ ಸೆಟ್ಲ್ ಆಗಿ, ಒಂದ್ 90 ಏರ್ಸ್ಕೊಂಡ್ “ಆ ಟೈಮ್ ಎಂಗಿತ್ತು ಗೊತ್ತಾ??” ಅಂತ ಶುರು ಆಚಕಂಡ್ ಇರ್ತಾರೆ. ಅವಾಗ ಜೊತಲಿ ಇರೋ ಸೊ ಕಾಲ್ಡ್ ಟೇಬಲ್ ಮೇಟ್ ಗತಿ ಅದೋ ಗತಿ.ಅವರ Flash back ಕೆಳೋಕು ಆಗದೆ, ಸುಮ್ನೆ ಮುಚ್ಕೊಂಡ್ ಕುಡಿಯಪ್ಪ ಅಂತ ಹೆಳೋಕು ಆಗದೆ ಅಲ್ಲಿಂದ ಆದಷ್ಟು ಬೇಗ Escape ಅಗೋ plan ಮಾಡ್ತಾ ಇರ್ತಾನೆ.

ಆ ವಯಸ್ಸು ಹಂಗೆ, ಆ ಟೈಮಲ್ಲಿ ಮಾಡಿದ ತರ್ಲೆ ಗಳನ್ನ ತುಂಬ ಬೇಗ ಮರೆಯೋಕೆ ಆಗಲ್ಲ. ನಾವ್ ಎಷ್ಟೇ ಬೆಳೆದರು, ನಮ್ಮ ಬಾಲ್ಯದ ಗೆಳೆಯರನ್ನ ಮರೆಯೋಕೆ ಆಗಲ್ಲ, ಒಂದ್ ಹತ್ತು ವರ್ಷದ ಹಿಂದೆ ಟ್ರೈ ಮಾಡಿದ್ರೆ ಮರಿ ಬಹುದಿತ್ತು ಯಾಕೆಂದ್ರೆ ಅವಗ ಈ ಫೇಸ್ ಬುಕ್, ಟ್ವಿಟ್ಟರ್ ಇರಲಿಲ್ಲ. ಒಬ್ಬರನ್ನೊಬ್ಬರು ನೂಡ್ಬೇಕಂದ್ರೆ ವರ್ಷಗಳು ಬೇಕಾಗಿತ್ತು. ಆದರೆ ಇವಾಗ ಅವರೆಲ್ಲ ಬರಿ ಒಂದ್ ಮೆಸೇಜ್ ದೂರದಲ್ಲಿ ಇದಾರೆ ಅಷ್ಟೇ. ನಾವ್ ಯಾವಾಗ್ ಬೇಕಾದ್ರು ಭೇಟಿ ಮಾಡ್ ಬಹುದು. ಅವಗಿಂದ ಇವಾಗವರ್ಗು ದೊಡ್ಡ ದೊಡ್ಡ ಅವಿಷ್ಕಾರ ಗಳನ್ನ ನೋಡುತ್ತಾ ಬೆಳೆದ ನಾವೇ ಲಕ್ಕಿ.

ದಾವಣಗೆರೆ (1986-2000)

ನಮ್ Childhood ಸೂಪರ್👌, ಇವಾಗ ಎಷ್ಟೋ ಮಕ್ಕಳಿಗೆ WWF Cards, ಗೋಲಿ, ಬಕ್ಲಾಸ್, Brick game, ಲಗೋರಿ, ಚಿನ್ನಿ ದಂಡ, ಬೆನ್ನಿಗೆ ಹೂಡಿಯೂ ಚೆಂಡು, ಕುಂಟ ಪಿಳ್ಳೆ, ಗಾಳಿಪಟ ಬಿಡೋದು ಇವೆಲ್ಲ ಗೊತ್ತೇ ಇಲ್ಲ.. ಇವಾಗ ಎನಿದ್ರೂ ಆನ್ಲೈನ್ ಗೇಮ್ಸ್, ಮೊಬೈಲ್ ಮತ್ತೆ ಪ್ಲೇ ಸ್ಟೇಷನ್.

ಒಂದ್ ಒಂದ್ ಸಲ feel ಆಗುತ್ತೆ, ಪಾಪ ಇವರಿಗೆ ಆ ಚಾನ್ಸ್ ಸಿಗಲಿಲ್ಲ ಅಲ್ವಾ ಅಂತ, ಆದರೂ ಇವಾಗಿನ ಮಕ್ಕಳಿಗೆ ಕಮ್ಮಿ ಏನು ಇಲ್ಲ, ಅವರ ಅಪ್ಪ ಅಮ್ಮ ಅವರ ಮಕ್ಕಳ ಅವಶ್ಯಕತೆ ಗಿಂತ ಸ್ವಲ್ಪ ಜಾಸ್ತಿನೇ ಎಲ್ಲ ಕೊಡ್ಸ್ಇರ್ತಾರೆ. ಅದು ಕೆಲವೊಮ್ಮೆ ಒಳ್ಳೇದು, ಕೆಲವೊಮ್ಮೆ ಕೆಟ್ಟುದ್. ಅದು ಅವರವರ Parents ತಮ್ಮ ಮಕ್ಕಳ್ನ ಬೆಳೆಸೊ Style ಮೇಲೆ depend.ಅದೇನೇ ಇರ್ಲಿ, ನಮ್ಮ್ ಟೈಮ್ ಅಲ್ಲಿ, ನಾವ್ ಮನೇಲಿ ಎಕ್ಕ-ಚಕ್ಕ ಬೈಸ್ಕೊಲ್ತಿದ್ದಿದ್ದು WWF Cards ಸಲುವಾಗಿ ಮತ್ತೆ ಗೋಲಿ ಸಲುವಾಗಿ. ಎಷ್ಟ್ ಗೋಲಿ ಜೊಡ್ಸಿದ್ದೆ ಅಂದ್ರೆ, ದಿನ ಹೋಗಿ ಬಕ್ಲಾಸ್ ಅಡಿ ಗೋಲಿ ಗೆಲ್ಲೋದು, ಗೆದ್ದ ಗೂಲಿನ ರೂಪಾಯಿಗೆ ಹತ್ತು ಮಾರೋದು. ಹೌದು!! ನಾವ್ ಗೋಲಿ ಸ್ಟಾರ್ಟ್ ಮಾಡಿದ್ದೆ ಮಾಡಿದ್ದು,  ಮೊದಲಿಗೆ ಬರಿ ಆಟ ಆಗಿತ್ತು, ಆಮೇಲೆ ಪ್ರತಿಷ್ಠೆ ಬಂತು..  ಕೊನೆಗೆ ದುಡ್ಡಿಗೆ ಬಂದು ನಿಲ್ತು.ಒಳ್ಳೆ ಮಜಾ ಮಾತ್ರ!!

ನಾವು ನಮ್ಮ್ ಮನೆ ಅಕ್ಕ ಪಕ್ಕ ಎರೆಯಾದಲ್ಲೆಲ್ಲ ಫುಲ್ ಫೇಮಸ್. ಐವತ್ತು ಗೋಲಿ ಚಡ್ಡಿ ಜೇಬಲ್ಲಿ ಅಕ್ಕಂಡ್ ಚಲ್ ಚಲ್ ಸೌಂಡ್ ಮಾಡ್ಕೊಂಡ್ ರೋಡಲ್ಲಿ ಹೋಗ್ತಿದ್ದ ಮಜಾನೇ ಬೇರೆ!! ಆ ಮಜಾ ಇವಾಗ ಬ್ಯಾಂಕ್ ಅಲ್ಲಿ ಎಷ್ಟ್ ಲಕ್ಷ ಬ್ಯಾಲೆನ್ಸ್ ಇದ್ರೂ ಬರಲ್ಲ!! ಲೋಕಲ್ ಏರಿಯ ಗ್ಯಾಂಗ್, ಗೋಲಿ, ಕ್ರಿಕೆಟ್ ಅಂಡ್ ಡಬ್ಲ್ಯೂ ಡಬ್ಲ್ಯೂ ಎಫ್ ಕಾರ್ಡ್ಸ್ ಬರೀ ಇದರಲ್ಲೇ ಫಸ್ಟ್ ಹತ್ತು ವರ್ಷ ಕಳೆದಿದ್ದು. ಇದು ಬಿಟ್ಟರೇ ಸ್ಕೂಲ್ಗೆ ಹೋಗಬೇಕಾದರೆ ಮರ ಹತ್ತಿ ಕದ್ದು ಪರಲಿಕಾಯಿ ತಿನ್ನೋದು.. ಅಷ್ಟೇ ಲೈಫ್ ಆದ್ರೂ ಸೂಪರ್ ಆಗಿತ್ತು. ಹತ್ತಲಿಲ್ಲದ್ ಮರ ಇಲ್ಲ, ಆಡ್ಲಿಲ್ಲದ್ ಆಟ ಇಲ್ಲ, ಹೂಡಿಲಿಲ್ಲಿದ ಕಿಟಿಕಿ ಗಾಜಿಲ್ಲ!!

ನಮ್ಮ್ ಮನೆ ಸುತ್ತ ಮುತ್ತ ಇರೋ ಎಲ್ಲ ಮನೆ ಕಿಟಕಿ ಗಾಜಗಳನ ಚೂರ್ ಚೂರ್ ಮಾಡಿರೋ ಕೀರ್ತಿ ನಮ್ದೆ.. ಆಮೇಲಾಮೇಲೆ ನಾವ್ ಬ್ಯಾಟ್ ಇಟ್ಕೊಂದ್ರೆ ಸಾಕು, ಜನ ಉಗಿಯೂಕೆ ಶುರು ಅಚ್ಕೊಂಡಿದ್ರು ಅದುಕ್ಕೆ ಕ್ರಿಕೆಟ್ ಅಡೂಕೆ ಒಂದ್ ಗ್ರೌಂಡ್ ಫಿಕ್ಸ್ ಮಾಡೋ ಪರಿಸ್ಥಿತಿ ಬಂತು. ನಮ್ಮ್ ಮನೆ ಕೆ.ಬಿ Extn ಇಂದ ಹೈಸ್ಕೂಲ್ ಫೀಲ್ಡ್ ದೂರ, ಕಾವೇರಮ್ಮ ಸ್ಕೂಲ್ ಫೀಲ್ಡ್ ಬೇರೆ ಏರಿಯ ಹುಡಗುರ ಕಾಟ, ಶಿವಯೋಗಿ ಮಂದಿರ ತಾತ್ಕಾಲಿಕ ಕ್ರೀಡಾಂಗಣ ವಾಗಿ ಫಿಕ್ಸ್ ಆಯಿತು. ಒಂದ್ ಎರಡು ವಾರ ಭಗತ್ ಸಿಂಗ್ ನಗರ ಹುಡುಗರ ಮೇಲೆ ಮ್ಯಾಚ್ ಅಡಿದ್ವಿ, ಆದ್ರೆ ಅಲ್ಲೂ ಕಿರಿಕ್ ಆಯಿತು, ಪಿಚಗೋಸ್ಕರ ಗಲಾಟೆ ಆಯಿತು, ಮತ್ತಿನ್ನೇನು ಸರಿ ಅಂತ ಬ್ಯಾಕ್ ಟು ನಮ್ಮ Extension.

ನಮ್ ಮನೆ 1st ಕ್ರಾಸ್ ಇಂದ ಸ್ವಲ್ಪ ದೂರ ಹೋದ್ರೆ ರೂಪಾಲಿ ಬಾರ್, ಅದ್ರ ಎದುರುಗಡೆನೇ ಒಂದ್ ಚಿಕ್ಕ ಕಾಲಿ ಜಾಗ , ಮಿನಿ ಕ್ರಿಕೆಟ್ ಅಡೂಕೆ ಸಕ್ಕತ್ ಜಾಗ ಅದು. ಆ ಜಾಗದಲ್ಲಿ ಒಂದ್ ಮರ, ಮರ ಪಕ್ಕ ಚಿಕ್ಕ ದೇವಸ್ಥಾನ ಅದು ಬಿಟ್ಟರೆ ಉಳ್ದಿದೆಲ್ಲ ಗ್ರೌಂಡ್. ನಾವ್ ಅದನ್ನ ನೂಡ್ತಿದ್ದಂಗೆ ಮೆಂಟಲ್ಲಿ ಫಿಕ್ಸ್ ಅಗೊದ್ವಿ, ನಮಗೆ ಅಂತ, ನಮ್ದು ಅನ್ನೋ ಗ್ರೌಂಡ್ ಸಿಕ್ಕ ಖುಷಿ. ಇನ್ನೇನು ವಿಕೆಟ್ ನೆಟ್ಟು, ಆಟ ಶುರು ಅಚ್ಕೊಂದ್ವಿ. ಅವಾಗ ಯಾರತ್ರ ಬ್ಯಾಟ್ ಇರುತ್ತೊ ಅವನೇ ಕ್ಯಾಪ್ಟನ್, ಯಾರತ್ರ ವಿಕೆಟ್ ಇರುತ್ತೊ ಅವನೇ ಅಂಪೈರ್ ( ಅಂದ್ರೆ ಅವನದೇ ಫೈನಲ್ ಮಾತು).

-ರವಿ ಕೊಟ್ರೇಶ್
















Wednesday, September 6, 2017

Ag-Rich-Culture- The Beginning

Agriculture as "Ag-Rich-Culture" 

India, the land of villages is considered as one of the richest countries in the World. I say it proudly that's because of the abundance of natural resources, it's dramatic and blessed climatic conditions and obviously the proud History (which shouts about country's glory). 

Once upon a time ( definitely not now), Agriculture was considered as the main source of livelihood and " Farmers" as the back bone of the fortunate country. Unfortunately, as time passed by and with the exposure of technology and science people priorities changed, preferences changed, and gradually, Son of a farmer turned into a slave of the technology!!!


One shouldn't forget that all the expenses of the transformation process of "Son to slave" was fulfilled by a farmer. Only a farmer knows the pain of this transformation but he still fights the battle of  uncertainty alone with a smile on his face.


Thanks for your time!!

Happy Reading!!
Ravi Kotresh

That One thing..!!


           I don't know really what is that “one thing” which drives every human being to live on this earth. Is that “Money”? If so how much money one should have to satisfy himself? Or Is that “One thing” could be love. Not sure, if it is love then why do still people fight for their existence? If everyone loves each other and if love is the only reason to live, undoubtedly, the entire World would have become heaven, without any noise at respective borders.

         So, then what could that be? Honestly, i have this question in mind right from my childhood and still searching for an answer. I also understand that one cannot define “Life” by standard definition. The definition of life changes from person to person, region to region, that absolutely depends upon the one's perspective towards life and nobody would be able to judge that definition. If any judgments exist, I could challenge the Sun, the Moon & The Earth just to shout “ that judgment is biased”. 

Sometimes, I wonder “Why the hell people hustle throughout their lives?” I have seen people sacrificing their dreams, I have seen people who amend themselves to the flow of life to survive and fulfill their family needs and also I have seen people who challenged every impossible odds to satisfy their desires but none of the above could clearly convince me what that “one thing” which drives all of us. 

Am i referring to purpose of the life here? No, definitely not. I am literally talking about those minute aspects which help a person to identify the purpose. Okay, let me be clear.All i want to say is “ The Purpose of life is made up of different minute transactions in one's life,which will drive human towards the main objective”. The purpose can be identified only through analyzing the experience and no one yet born to define the characteristics of experience, hence my gut feeling wouldn't allow me to conclude The Purpose as “That one thing”.


If not Money,Love, experience & purpose, what could one think of that driving force? Being frank, I don't mind to accept the fact that “I don't know”. But I do believe that many excellent critics exist and one fine day they come back and shoot me with all possible answers to my lunatic instincts.I WELCOME ALL OF THEM.

 Expecting your comments, 

-Ravi Kotresh

Monday, September 4, 2017

90 ಡಿಗ್ರಿ ನಂತರ- Final year feelings!!


   ಕಾಲೇಜ್ ಲೈಫ್ ನ ಸವಿ ಸಂಪೂರ್ಣ ಸವಿದು, ಹಳೆ ಹುಡುಗಿಯರ ಫೋನ್ ನಂಬರ್ ನ ಸೆಲ್ ಫೋನ್ ಇಂದ delete ಮಾಡೋ ಟೈಮ್ ಅದು. Love success ಅಗ್ಬೇಕಂದ್ರೆ Bank balance ಇರಬೇಕು ಅನ್ನೋ ಸತ್ಯ ಅರದಂಬರ್ದ ಅರ್ಥ ಆಗಿತ್ತು. ಹೇಳಿ ಕೇಳಿ ಅದು July-August ಸೀಸನ್, ಡಿಗ್ರಿ ಫೈನಲ್ ಇಯರ್ ಎಕ್ಸಾಮ್ಸ್ ಆಗ ತಾನೇ ಜಸ್ಟ್ ಮುಗಿದ ಹೋಗಿತ್ತು. ಒಳ್ಳೆ ಮಳೆಗಾಲ. ಇನ್ನೊಂದ್ interesting co-incidence ಏನಪ ಅಂದ್ರೆ “ ಮುಂಗಾರು ಮಳೆ” ಎಂಬ ಅದ್ದೂರಿ ಸೂಪರ್ ಹಿಟ್ ಚಿತ್ರ ಕೂಡ ತೆರೆ ಕಂಡಿತ್ತು. ಇನ್ನೇನ್ ಡಿಗ್ರಿ ಮುಗೀಬೆಕು, ಮುಂಗಾರು ಮಳೆ ರಿಲೀಸ್ ಆಗಿತ್ತು.

ಆ ಚಿತ್ರ ಯುವ ಜನತೆಯ ಮೇಲೆ  ಎಷ್ಟು Effective impact ಮಾಡಿತ್ತು ಅಂದ್ರೆ ಎಲ್ಲ ಕಾಲೇಜ್ ಹುಡುಗ್ರು “ಪ್ರೀತಿ ಮಧುರ ತ್ಯಾಗ ಅಮರ ” ಅನ್ನೋ slogan ನ ಸ್ವಲ್ಪ ಸೀರಿಯಸ್ ಆಗೇ ತಗೊಂಡಿದ್ರು. ಹೊಸ ಟ್ರೆಂಡ್ ಸೃಷ್ಟಿ ಆಗಿತ್ತು. ಆಗ Love ಮಾಡಿ ಮದುವೆ ಅಗೋ ಹುಡುಗ್ರು ಗಿಂತ , ಲವ್ ಮಾಡಿ ಬಿಟ್ಟು ಕೊಡೊ ಹುಡುಗರ ಸಂಖ್ಯಾನೆ ಜಾಸ್ತಿ ಇತ್ತು. ಯಾರ್ ಏನೇ ಹೇಳಿ, ಮುಂಗಾರು ಮಳೆ ಚಿತ್ರ ಮಾತ್ರ ಭಾರತ ಸಿನಿಮಾ ರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿತ್ತು. ತೆಲುಗು, ತಮಿಳು ಚಿತ್ರರಂಗದ ಅವರು ಕನ್ನಡ ಇಂಡಸ್ಟ್ರಿ ಸ್ಯಾಂಡಲ್ ವುಡ್ ಕಡೆ ಮೊಟ್ಟ ಮೊದಲ ಬಾರಿಗೆ ಗಮನ ಹರಿಸಿ, ತಮ್ಮ ಮೂಗ ಮೇಲೆ ಬರ್ಲಿಟ್ ಕೊಂಡಿದವು.

ಯುವಕರು ಮುಂಗಾರು ಮಳೆಯಲ್ಲಿ ನೆನೆಯುತ್ತಾ, ಪ್ರೀತಿ ನ ತ್ಯಾಗ ಮಾಡಾಕ ರೆಡಿ ಆಗಬೇಕಾದರೆ, ಅದೇ ಟೈಮಲ್ಲಿ ಇನ್ನೊಂದ್ ಚಿತ್ರ ಪ್ರೀತಿಯಲ್ಲಿ, ಪ್ರೀತಿಗಾಗಿ  ಸಾಯಕ್ಕೂ ರೆಡಿ ಇರ್ಬೇಕು ಅಂತ ಇಡೀ “ದುನಿಯಾ”ಗೆ ಕೂಗಿ ಹೇಳುತ್ತಿತ್ತು. ಈ ಎರಡು ಚಿತ್ರಗಳ ಮಧ್ಯ, ನಮ್ಮ್ ಹುಡುಗರ ಮನಸು ಕಕ್ಕಾ ಬಿಕ್ಕಿ ಆಗಿದ್ದು ಸುಳ್ಳಲ್ಲ!!!

ಎರಡು ಸಾವಿರದ ಏಳನೇ ಇಸವಿಯ ಕೊನೆಯಲ್ಲಿ ಕರ್ನಾಟಕದ ಯುವಜನತೆ ಮುಂಗಾರು ಮಳೆಯಲ್ಲಿ ನೆಂದು ದುನಿಯದಲ್ಲಿ ಎದ್ದು  ತಮ್ಮ ತಮ್ಮ ಜೀವನದ ಭವಿಷ್ಯದ ಬಗ್ಗೆ ಯೋಚನೆ ಮಾಡಲು ಶುರು ಮಾಡಿದರು. ಎಲ್ಲಾ ಫೈನಲ್ ಇಯರ್ ವಿದ್ಯಾರ್ಥಿಗಳ ಸಾಮಾನ್ಯ ಪ್ರೆಶ್ನೆ ಏನಪ್ಪಾ ಅಂದ್ರೆ “ಡಿಗ್ರಿ ಆಯಿತು, ಮುಂದೇನು”? ಈ ಪ್ರೆಶ್ನೆಗೂ ಎಲ್ಲರ ಹತ್ರ ಒಂದ್ ಕಾಮನ್ ಉತ್ತರ ಇತ್ತು. ಯಾರಿಗೆ ಏನ್ ಕೇಳಿದ್ರು ಹೆಳ್ತಾ ಇದ್ದದ್ದು ಒಂದೇ ಉತ್ತರ, “ನೋಡ್ಬೇಕು!!” ಅಲ್ಲಿಗೆ ಒಂದ್ ಅರ್ಥ ಮಾಡ್ಕೊಬೆಕು, “ಡಿಗ್ರಿ ಆದ್ಮೇಲೆ ಮುಂದೆ ನೋಡ್ಬೇಕು”. ಏನ್ ನೋಡಿದ್ವಿ, ಏನ್ ನೋಡಬೇಕಿತ್ತು, ಏನ್ ನೋಡಲಿಲ್ಲ ಅನ್ನೋ ಪ್ರೆಶ್ನೆಗೆ ಉತ್ತರ ಯಾವತ್ತೂ ಸಿಗಲ್ಲ, ಹುಡುಕೊ ಪ್ರಯತ್ನನು ಮಾಡ್ಬೇಡಿ.

ವರ್ಷಗಟ್ಟಲೆ ಜೊತೆಗೇ ಇದ್ದು, ಒಂದೇ ತಟ್ಟೆಲಿ ಊಟ ಮಾಡಿದ ಗೆಳೆಯರೆಲ್ಲ ಬೇರೆ ಬೇರೆ ಆಗಿ ಅವರವರ ಕನಸಿನ ಹಿಂದೆ ಹೋಗೋ ಟೈಮ್ ಅದು. ಕೆಲವರಿಗೆ PG ಮಾಡೋ ಆಸೆ, ಕೆಲವರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡೋ ಛಲ, ಇನ್ನೂ ಉಳಿದವರಿಗೆ ಅಪ್ಪ ಹೆಲ್ದಂಗೆ ಇರೋ ಬಿಸಿನೆಸ್ ನೋಡಿಕೊಂಡ ಹೋಗೋ ಅವಕಾಶ, ಇದ್ಯಾವದು ಇಲ್ದೊರಿಗೆ ಇದ್ದದ್ದು ಒಂದೇ ದಾರಿ , ಅದು “ನಮ್ಮ ಬೆಂಗಳೂರು” ಮಾತ್ರ!! ಅವರು ಯಾರೇ ಆಗಿರಲಿ, ಏನೇ ಮಾಡಲಿ, ಎಲ್ಲಿಂದನಾದ್ರು ಬರಲಿ ಬೆಂಗಳೂರು ಎಲ್ಲರಿಗೂ ಕೈ ಚಾಚಿ ಕರೆದು,ಅವಕಾಶ ಕೊಟ್ಟು ಬದುಕೋ ಧೈರ್ಯ ಕೊಡ್ತಿತ್ತು, ಈಗಲೂ ಕೊಡ್ತಿದೆ!

- Ravi Kotresh

Friday, September 1, 2017

20's Confusion- Trust your Gut & Follow your Passion


I have seen one thing in common in most of the people in their 20's,while studying in
schools/college,they start thinking about their future jobs and the company to work for.. Never
do that!!

That should not be the case.. Never learn ONLY to earn. Its very important to understand the
purpose of education.One can look at any successful person, people become successful after chasing their dreams.They never dream of earning, but money follow them upon successful.. If they would ever thought of income in their early days, i bet they wouldn't have reached where they are today!!

There is no profit/loss in the game of success.. All we have only dreams and making those
dreams true.. So never give up on whatsoever. if something is not happening, make it happen
by analyzing thoroughly why it's not happening? There is no such thing on this earth that cannot
be done.All matters is how we do it? What resources we use? What’s the best time to make it
happen?

You might be down today but that's not the end..
I will share the real experiences in coming articles..

Keep reading and leave your comments

-Ravi Kotresh

My thoughts on youth & Education

ಅದು ಒಂದು life stage!! ಯಾವ್ದು ಅಂತೀರಾ?? ಅದೇ 15-25 ವಯಸು. ಗೊತ್ತಲ್ವಾ ನಮ್ಮ್ ಹುಡುಗ್ರು ಹೆಂಗೆ ಅಂತ?? ಆ ವಯಸ್ಸಿನ ಮಜಾನೇ ಬೇರೆ ಬಿಡಿ, ದೋಸರ ಮಾತೇ ಇಲ್ಲ!! ಆಗ ನಮ್ಮತ್ರ ಏನೇನು ಇರಲ್ವ ಅದನ್ನ ಆಮೇಲೆ ಕಷ್ಟ ಪಟ್ಟು ಪಡ್ಕೊತಿವಿ ಆದರೆ ಆ ಟೈಮ್ ನ ನೀವ್ ತಿಪ್ಪುರ್ ಲಾಗ್ ಹಾಕಿ life long ಕಷ್ಟ ಪಟ್ಟರು ಪಡಕಲಕ್ ಆಗಲ್ಲ!! ಯಾರೋ ದೊಡ್ಡ್ ಅವರು ಹೆಳಿದರಲ್ವಾ "The Student life is golden life" ಅಂತ, ಹೌದು ಅದು "Golden Life" ಆದರೆ ಅವಾಗ ಕಾಣೋ ಕನಸು, ಮಾಡೋ ಯೋಚನೆ, ಹೋಗೋ ದಾರಿ ಯಾವ್ದು Click ಆಗಲ್ಲ.. ಎಲ್ಲೋ ನೂರಕ್ಕೆ ನಾಲ್ಕ್ ಜನ Click ಆಗಿಲ್ಲ ಅಂದ್ರು ಅವರೇ Button ಓತ್ತಿ Selfie ತಗೊಂದಿರ್ತಾರೆ ಅಷ್ಟೇ. ನಮಿಗೆ ಗುರಿ, ಆಸೆ ಹುಟ್ಟೋದೆ ಆ ವಯಸ್ಸಲ್ಲಿ, ಆದ್ರೆ ಎಷ್ಟ್ ಜನ ಅವರ ಗುರಿ ಮುಟ್ಟಿರ್ತಾರೆ ಹೇಳಿ.. ಶೇಕಡ ಅರವತ್ತರಿಂದ ಎಪ್ಪತ್ತು % ಜನ fail ಆಗ್ತಾರೆ.ಆ failure ಅವರಿಗೆ ಮತ್ತೆ ಅವರ ಗುರಿ ಬಗ್ಗೆ ಯೋಚನೆ ಮಾಡೋಕೆ ಬಿಡಲ್ಲ, ಆದರೆ ನಾವು ಒಂದು ಆರ್ಥ ಮಾಡ್ಕೊಬೆಕು ನಾವು ಯಾವಾಗ ಎಲ್ಲಿ ಸೂಲ್ತಿ ವೋ ಅಲ್ಲೇ ಎದ್ದ್ ಗೆದ್ದಿ ತೋರಿಸ್ಬೇಕು. ಅದಕ್ಕೆ ನಮ್ಮ್ ಅತ್ರ Will power ಜೊತೆ Skill power ಕೂಡ ಇರಬೇಕು.ಆ Skill ಮೇಲೆ ನಮಿಗೆ ಸಂಪೂರ್ಣ ನಂಬಿಕೆ ಮುಖ್ಯ. ಪ್ರತಿ ವರ್ಷ ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳು CET ಬರೀತಾರೆ, ಅದರಲ್ಲಿ ಒಂದ್ ಪಕ್ಷ ಎಲ್ಲರು 90% ತಗಿದ್ರೆ ಎಲ್ರಿಗೂ Eng/Med seat ಕೊಡ್ತಾರ?? ಎಲ್ಲಿವರಗು ವಿದ್ಯಾರ್ಥಿಗಳು Just pass ಆಗ್ತರೊ ಅಲ್ಲಿ ವರಗೂ ನಮ್ College ಗಳು ದರೋಡೆ ಮಾಡ್ತಾರೆ.. ಒಂದ್ ಯೋಚನೆ ಮಾಡಿ, ಓದಿ ಕಲಿಯೂ ವಿದ್ಯೆನೆ ದುಡ್ದ್ ಕೊಟ್ಟಿ ಖರೀದಿ ಮಾಡಿದ್ರೆ ಆ ಅಲ್ಪ ಸ್ವಲ್ಪ ವಿದ್ಯೆ ಇಂದ ಮತ್ತೆ ದುಡ್ದ್ ಸಂಪಾದನೆ ಮಾಡೋಕೆ ಆಗುತ್ತಾ?? ನ್ಯಾಯವಾಗಿ ಮಾಡೋಕೆ ಸಾಧ್ಯನೆ ಇಲ್ಲ. 

ನಿಮ್ಮ ಅನಸಿಕೆ, ಅಭಿಪ್ರಾಯ ಹಾಗು ಅನುಭವ ದಯವಿಟ್ಟು ತಿಳಿಸಿ. -ರವಿ ಕೊಟ್ರೇಶ್