ಪ್ರತಿ ಒಬ್ಬರು ಅವರು ಚಿಕ್ಕೊರಿದ್ದಾಗ ಆಡಿದ ಆಟ, ಓದಿದ ಶಾಲೆ, ಮನೆ ಅತ್ರ ಮಾಡಿದ ಕಿರಿಕ್ ಗಳನ್ನ ಮರೆಯೂದಿಲ್ಲ. ಅದು ಮರೆಯೋಕು ಆಗಲ್ಲ!! ಅವಾಗವಾಗ ಯಾರತ್ರ ನಾದ್ರು,ಯವಾದನ ಟೇಬಲ್ ನಲ್ಲಿ ಸೆಟ್ಲ್ ಆಗಿ, ಒಂದ್ 90 ಏರ್ಸ್ಕೊಂಡ್ “ಆ ಟೈಮ್ ಎಂಗಿತ್ತು ಗೊತ್ತಾ??” ಅಂತ ಶುರು ಆಚಕಂಡ್ ಇರ್ತಾರೆ. ಅವಾಗ ಜೊತಲಿ ಇರೋ ಸೊ ಕಾಲ್ಡ್ ಟೇಬಲ್ ಮೇಟ್ ಗತಿ ಅದೋ ಗತಿ.ಅವರ Flash back ಕೆಳೋಕು ಆಗದೆ, ಸುಮ್ನೆ ಮುಚ್ಕೊಂಡ್ ಕುಡಿಯಪ್ಪ ಅಂತ ಹೆಳೋಕು ಆಗದೆ ಅಲ್ಲಿಂದ ಆದಷ್ಟು ಬೇಗ Escape ಅಗೋ plan ಮಾಡ್ತಾ ಇರ್ತಾನೆ.
ಆ ವಯಸ್ಸು ಹಂಗೆ, ಆ ಟೈಮಲ್ಲಿ ಮಾಡಿದ ತರ್ಲೆ ಗಳನ್ನ ತುಂಬ ಬೇಗ ಮರೆಯೋಕೆ ಆಗಲ್ಲ. ನಾವ್ ಎಷ್ಟೇ ಬೆಳೆದರು, ನಮ್ಮ ಬಾಲ್ಯದ ಗೆಳೆಯರನ್ನ ಮರೆಯೋಕೆ ಆಗಲ್ಲ, ಒಂದ್ ಹತ್ತು ವರ್ಷದ ಹಿಂದೆ ಟ್ರೈ ಮಾಡಿದ್ರೆ ಮರಿ ಬಹುದಿತ್ತು ಯಾಕೆಂದ್ರೆ ಅವಗ ಈ ಫೇಸ್ ಬುಕ್, ಟ್ವಿಟ್ಟರ್ ಇರಲಿಲ್ಲ. ಒಬ್ಬರನ್ನೊಬ್ಬರು ನೂಡ್ಬೇಕಂದ್ರೆ ವರ್ಷಗಳು ಬೇಕಾಗಿತ್ತು. ಆದರೆ ಇವಾಗ ಅವರೆಲ್ಲ ಬರಿ ಒಂದ್ ಮೆಸೇಜ್ ದೂರದಲ್ಲಿ ಇದಾರೆ ಅಷ್ಟೇ. ನಾವ್ ಯಾವಾಗ್ ಬೇಕಾದ್ರು ಭೇಟಿ ಮಾಡ್ ಬಹುದು. ಅವಗಿಂದ ಇವಾಗವರ್ಗು ದೊಡ್ಡ ದೊಡ್ಡ ಅವಿಷ್ಕಾರ ಗಳನ್ನ ನೋಡುತ್ತಾ ಬೆಳೆದ ನಾವೇ ಲಕ್ಕಿ.
ದಾವಣಗೆರೆ (1986-2000)
ನಮ್ Childhood ಸೂಪರ್👌, ಇವಾಗ ಎಷ್ಟೋ ಮಕ್ಕಳಿಗೆ WWF Cards, ಗೋಲಿ, ಬಕ್ಲಾಸ್, Brick game, ಲಗೋರಿ, ಚಿನ್ನಿ ದಂಡ, ಬೆನ್ನಿಗೆ ಹೂಡಿಯೂ ಚೆಂಡು, ಕುಂಟ ಪಿಳ್ಳೆ, ಗಾಳಿಪಟ ಬಿಡೋದು ಇವೆಲ್ಲ ಗೊತ್ತೇ ಇಲ್ಲ.. ಇವಾಗ ಎನಿದ್ರೂ ಆನ್ಲೈನ್ ಗೇಮ್ಸ್, ಮೊಬೈಲ್ ಮತ್ತೆ ಪ್ಲೇ ಸ್ಟೇಷನ್.
ಒಂದ್ ಒಂದ್ ಸಲ feel ಆಗುತ್ತೆ, ಪಾಪ ಇವರಿಗೆ ಆ ಚಾನ್ಸ್ ಸಿಗಲಿಲ್ಲ ಅಲ್ವಾ ಅಂತ, ಆದರೂ ಇವಾಗಿನ ಮಕ್ಕಳಿಗೆ ಕಮ್ಮಿ ಏನು ಇಲ್ಲ, ಅವರ ಅಪ್ಪ ಅಮ್ಮ ಅವರ ಮಕ್ಕಳ ಅವಶ್ಯಕತೆ ಗಿಂತ ಸ್ವಲ್ಪ ಜಾಸ್ತಿನೇ ಎಲ್ಲ ಕೊಡ್ಸ್ಇರ್ತಾರೆ. ಅದು ಕೆಲವೊಮ್ಮೆ ಒಳ್ಳೇದು, ಕೆಲವೊಮ್ಮೆ ಕೆಟ್ಟುದ್. ಅದು ಅವರವರ Parents ತಮ್ಮ ಮಕ್ಕಳ್ನ ಬೆಳೆಸೊ Style ಮೇಲೆ depend.ಅದೇನೇ ಇರ್ಲಿ, ನಮ್ಮ್ ಟೈಮ್ ಅಲ್ಲಿ, ನಾವ್ ಮನೇಲಿ ಎಕ್ಕ-ಚಕ್ಕ ಬೈಸ್ಕೊಲ್ತಿದ್ದಿದ್ದು WWF Cards ಸಲುವಾಗಿ ಮತ್ತೆ ಗೋಲಿ ಸಲುವಾಗಿ. ಎಷ್ಟ್ ಗೋಲಿ ಜೊಡ್ಸಿದ್ದೆ ಅಂದ್ರೆ, ದಿನ ಹೋಗಿ ಬಕ್ಲಾಸ್ ಅಡಿ ಗೋಲಿ ಗೆಲ್ಲೋದು, ಗೆದ್ದ ಗೂಲಿನ ರೂಪಾಯಿಗೆ ಹತ್ತು ಮಾರೋದು. ಹೌದು!! ನಾವ್ ಗೋಲಿ ಸ್ಟಾರ್ಟ್ ಮಾಡಿದ್ದೆ ಮಾಡಿದ್ದು, ಮೊದಲಿಗೆ ಬರಿ ಆಟ ಆಗಿತ್ತು, ಆಮೇಲೆ ಪ್ರತಿಷ್ಠೆ ಬಂತು.. ಕೊನೆಗೆ ದುಡ್ಡಿಗೆ ಬಂದು ನಿಲ್ತು.ಒಳ್ಳೆ ಮಜಾ ಮಾತ್ರ!!
ನಾವು ನಮ್ಮ್ ಮನೆ ಅಕ್ಕ ಪಕ್ಕ ಎರೆಯಾದಲ್ಲೆಲ್ಲ ಫುಲ್ ಫೇಮಸ್. ಐವತ್ತು ಗೋಲಿ ಚಡ್ಡಿ ಜೇಬಲ್ಲಿ ಅಕ್ಕಂಡ್ ಚಲ್ ಚಲ್ ಸೌಂಡ್ ಮಾಡ್ಕೊಂಡ್ ರೋಡಲ್ಲಿ ಹೋಗ್ತಿದ್ದ ಮಜಾನೇ ಬೇರೆ!! ಆ ಮಜಾ ಇವಾಗ ಬ್ಯಾಂಕ್ ಅಲ್ಲಿ ಎಷ್ಟ್ ಲಕ್ಷ ಬ್ಯಾಲೆನ್ಸ್ ಇದ್ರೂ ಬರಲ್ಲ!! ಲೋಕಲ್ ಏರಿಯ ಗ್ಯಾಂಗ್, ಗೋಲಿ, ಕ್ರಿಕೆಟ್ ಅಂಡ್ ಡಬ್ಲ್ಯೂ ಡಬ್ಲ್ಯೂ ಎಫ್ ಕಾರ್ಡ್ಸ್ ಬರೀ ಇದರಲ್ಲೇ ಫಸ್ಟ್ ಹತ್ತು ವರ್ಷ ಕಳೆದಿದ್ದು. ಇದು ಬಿಟ್ಟರೇ ಸ್ಕೂಲ್ಗೆ ಹೋಗಬೇಕಾದರೆ ಮರ ಹತ್ತಿ ಕದ್ದು ಪರಲಿಕಾಯಿ ತಿನ್ನೋದು.. ಅಷ್ಟೇ ಲೈಫ್ ಆದ್ರೂ ಸೂಪರ್ ಆಗಿತ್ತು. ಹತ್ತಲಿಲ್ಲದ್ ಮರ ಇಲ್ಲ, ಆಡ್ಲಿಲ್ಲದ್ ಆಟ ಇಲ್ಲ, ಹೂಡಿಲಿಲ್ಲಿದ ಕಿಟಿಕಿ ಗಾಜಿಲ್ಲ!!
ನಮ್ಮ್ ಮನೆ ಸುತ್ತ ಮುತ್ತ ಇರೋ ಎಲ್ಲ ಮನೆ ಕಿಟಕಿ ಗಾಜಗಳನ ಚೂರ್ ಚೂರ್ ಮಾಡಿರೋ ಕೀರ್ತಿ ನಮ್ದೆ.. ಆಮೇಲಾಮೇಲೆ ನಾವ್ ಬ್ಯಾಟ್ ಇಟ್ಕೊಂದ್ರೆ ಸಾಕು, ಜನ ಉಗಿಯೂಕೆ ಶುರು ಅಚ್ಕೊಂಡಿದ್ರು ಅದುಕ್ಕೆ ಕ್ರಿಕೆಟ್ ಅಡೂಕೆ ಒಂದ್ ಗ್ರೌಂಡ್ ಫಿಕ್ಸ್ ಮಾಡೋ ಪರಿಸ್ಥಿತಿ ಬಂತು. ನಮ್ಮ್ ಮನೆ ಕೆ.ಬಿ Extn ಇಂದ ಹೈಸ್ಕೂಲ್ ಫೀಲ್ಡ್ ದೂರ, ಕಾವೇರಮ್ಮ ಸ್ಕೂಲ್ ಫೀಲ್ಡ್ ಬೇರೆ ಏರಿಯ ಹುಡಗುರ ಕಾಟ, ಶಿವಯೋಗಿ ಮಂದಿರ ತಾತ್ಕಾಲಿಕ ಕ್ರೀಡಾಂಗಣ ವಾಗಿ ಫಿಕ್ಸ್ ಆಯಿತು. ಒಂದ್ ಎರಡು ವಾರ ಭಗತ್ ಸಿಂಗ್ ನಗರ ಹುಡುಗರ ಮೇಲೆ ಮ್ಯಾಚ್ ಅಡಿದ್ವಿ, ಆದ್ರೆ ಅಲ್ಲೂ ಕಿರಿಕ್ ಆಯಿತು, ಪಿಚಗೋಸ್ಕರ ಗಲಾಟೆ ಆಯಿತು, ಮತ್ತಿನ್ನೇನು ಸರಿ ಅಂತ ಬ್ಯಾಕ್ ಟು ನಮ್ಮ Extension.
ನಮ್ ಮನೆ 1st ಕ್ರಾಸ್ ಇಂದ ಸ್ವಲ್ಪ ದೂರ ಹೋದ್ರೆ ರೂಪಾಲಿ ಬಾರ್, ಅದ್ರ ಎದುರುಗಡೆನೇ ಒಂದ್ ಚಿಕ್ಕ ಕಾಲಿ ಜಾಗ , ಮಿನಿ ಕ್ರಿಕೆಟ್ ಅಡೂಕೆ ಸಕ್ಕತ್ ಜಾಗ ಅದು. ಆ ಜಾಗದಲ್ಲಿ ಒಂದ್ ಮರ, ಮರ ಪಕ್ಕ ಚಿಕ್ಕ ದೇವಸ್ಥಾನ ಅದು ಬಿಟ್ಟರೆ ಉಳ್ದಿದೆಲ್ಲ ಗ್ರೌಂಡ್. ನಾವ್ ಅದನ್ನ ನೂಡ್ತಿದ್ದಂಗೆ ಮೆಂಟಲ್ಲಿ ಫಿಕ್ಸ್ ಅಗೊದ್ವಿ, ನಮಗೆ ಅಂತ, ನಮ್ದು ಅನ್ನೋ ಗ್ರೌಂಡ್ ಸಿಕ್ಕ ಖುಷಿ. ಇನ್ನೇನು ವಿಕೆಟ್ ನೆಟ್ಟು, ಆಟ ಶುರು ಅಚ್ಕೊಂದ್ವಿ. ಅವಾಗ ಯಾರತ್ರ ಬ್ಯಾಟ್ ಇರುತ್ತೊ ಅವನೇ ಕ್ಯಾಪ್ಟನ್, ಯಾರತ್ರ ವಿಕೆಟ್ ಇರುತ್ತೊ ಅವನೇ ಅಂಪೈರ್ ( ಅಂದ್ರೆ ಅವನದೇ ಫೈನಲ್ ಮಾತು).
-ರವಿ ಕೊಟ್ರೇಶ್
Nice..
ReplyDeleteSoooper childhood memories..Nicely composed👌
ReplyDelete