ಕಾಲೇಜ್ ಲೈಫ್ ನ ಸವಿ ಸಂಪೂರ್ಣ ಸವಿದು, ಹಳೆ ಹುಡುಗಿಯರ ಫೋನ್ ನಂಬರ್ ನ ಸೆಲ್ ಫೋನ್ ಇಂದ delete ಮಾಡೋ ಟೈಮ್ ಅದು. Love success ಅಗ್ಬೇಕಂದ್ರೆ Bank balance ಇರಬೇಕು ಅನ್ನೋ ಸತ್ಯ ಅರದಂಬರ್ದ ಅರ್ಥ ಆಗಿತ್ತು. ಹೇಳಿ ಕೇಳಿ ಅದು July-August ಸೀಸನ್, ಡಿಗ್ರಿ ಫೈನಲ್ ಇಯರ್ ಎಕ್ಸಾಮ್ಸ್ ಆಗ ತಾನೇ ಜಸ್ಟ್ ಮುಗಿದ ಹೋಗಿತ್ತು. ಒಳ್ಳೆ ಮಳೆಗಾಲ. ಇನ್ನೊಂದ್ interesting co-incidence ಏನಪ ಅಂದ್ರೆ “ ಮುಂಗಾರು ಮಳೆ” ಎಂಬ ಅದ್ದೂರಿ ಸೂಪರ್ ಹಿಟ್ ಚಿತ್ರ ಕೂಡ ತೆರೆ ಕಂಡಿತ್ತು. ಇನ್ನೇನ್ ಡಿಗ್ರಿ ಮುಗೀಬೆಕು, ಮುಂಗಾರು ಮಳೆ ರಿಲೀಸ್ ಆಗಿತ್ತು.
ಆ ಚಿತ್ರ ಯುವ ಜನತೆಯ ಮೇಲೆ ಎಷ್ಟು Effective impact ಮಾಡಿತ್ತು ಅಂದ್ರೆ ಎಲ್ಲ ಕಾಲೇಜ್ ಹುಡುಗ್ರು “ಪ್ರೀತಿ ಮಧುರ ತ್ಯಾಗ ಅಮರ ” ಅನ್ನೋ slogan ನ ಸ್ವಲ್ಪ ಸೀರಿಯಸ್ ಆಗೇ ತಗೊಂಡಿದ್ರು. ಹೊಸ ಟ್ರೆಂಡ್ ಸೃಷ್ಟಿ ಆಗಿತ್ತು. ಆಗ Love ಮಾಡಿ ಮದುವೆ ಅಗೋ ಹುಡುಗ್ರು ಗಿಂತ , ಲವ್ ಮಾಡಿ ಬಿಟ್ಟು ಕೊಡೊ ಹುಡುಗರ ಸಂಖ್ಯಾನೆ ಜಾಸ್ತಿ ಇತ್ತು. ಯಾರ್ ಏನೇ ಹೇಳಿ, ಮುಂಗಾರು ಮಳೆ ಚಿತ್ರ ಮಾತ್ರ ಭಾರತ ಸಿನಿಮಾ ರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿತ್ತು. ತೆಲುಗು, ತಮಿಳು ಚಿತ್ರರಂಗದ ಅವರು ಕನ್ನಡ ಇಂಡಸ್ಟ್ರಿ ಸ್ಯಾಂಡಲ್ ವುಡ್ ಕಡೆ ಮೊಟ್ಟ ಮೊದಲ ಬಾರಿಗೆ ಗಮನ ಹರಿಸಿ, ತಮ್ಮ ಮೂಗ ಮೇಲೆ ಬರ್ಲಿಟ್ ಕೊಂಡಿದವು.
ಯುವಕರು ಮುಂಗಾರು ಮಳೆಯಲ್ಲಿ ನೆನೆಯುತ್ತಾ, ಪ್ರೀತಿ ನ ತ್ಯಾಗ ಮಾಡಾಕ ರೆಡಿ ಆಗಬೇಕಾದರೆ, ಅದೇ ಟೈಮಲ್ಲಿ ಇನ್ನೊಂದ್ ಚಿತ್ರ ಪ್ರೀತಿಯಲ್ಲಿ, ಪ್ರೀತಿಗಾಗಿ ಸಾಯಕ್ಕೂ ರೆಡಿ ಇರ್ಬೇಕು ಅಂತ ಇಡೀ “ದುನಿಯಾ”ಗೆ ಕೂಗಿ ಹೇಳುತ್ತಿತ್ತು. ಈ ಎರಡು ಚಿತ್ರಗಳ ಮಧ್ಯ, ನಮ್ಮ್ ಹುಡುಗರ ಮನಸು ಕಕ್ಕಾ ಬಿಕ್ಕಿ ಆಗಿದ್ದು ಸುಳ್ಳಲ್ಲ!!!
ಎರಡು ಸಾವಿರದ ಏಳನೇ ಇಸವಿಯ ಕೊನೆಯಲ್ಲಿ ಕರ್ನಾಟಕದ ಯುವಜನತೆ ಮುಂಗಾರು ಮಳೆಯಲ್ಲಿ ನೆಂದು ದುನಿಯದಲ್ಲಿ ಎದ್ದು ತಮ್ಮ ತಮ್ಮ ಜೀವನದ ಭವಿಷ್ಯದ ಬಗ್ಗೆ ಯೋಚನೆ ಮಾಡಲು ಶುರು ಮಾಡಿದರು. ಎಲ್ಲಾ ಫೈನಲ್ ಇಯರ್ ವಿದ್ಯಾರ್ಥಿಗಳ ಸಾಮಾನ್ಯ ಪ್ರೆಶ್ನೆ ಏನಪ್ಪಾ ಅಂದ್ರೆ “ಡಿಗ್ರಿ ಆಯಿತು, ಮುಂದೇನು”? ಈ ಪ್ರೆಶ್ನೆಗೂ ಎಲ್ಲರ ಹತ್ರ ಒಂದ್ ಕಾಮನ್ ಉತ್ತರ ಇತ್ತು. ಯಾರಿಗೆ ಏನ್ ಕೇಳಿದ್ರು ಹೆಳ್ತಾ ಇದ್ದದ್ದು ಒಂದೇ ಉತ್ತರ, “ನೋಡ್ಬೇಕು!!” ಅಲ್ಲಿಗೆ ಒಂದ್ ಅರ್ಥ ಮಾಡ್ಕೊಬೆಕು, “ಡಿಗ್ರಿ ಆದ್ಮೇಲೆ ಮುಂದೆ ನೋಡ್ಬೇಕು”. ಏನ್ ನೋಡಿದ್ವಿ, ಏನ್ ನೋಡಬೇಕಿತ್ತು, ಏನ್ ನೋಡಲಿಲ್ಲ ಅನ್ನೋ ಪ್ರೆಶ್ನೆಗೆ ಉತ್ತರ ಯಾವತ್ತೂ ಸಿಗಲ್ಲ, ಹುಡುಕೊ ಪ್ರಯತ್ನನು ಮಾಡ್ಬೇಡಿ.
ವರ್ಷಗಟ್ಟಲೆ ಜೊತೆಗೇ ಇದ್ದು, ಒಂದೇ ತಟ್ಟೆಲಿ ಊಟ ಮಾಡಿದ ಗೆಳೆಯರೆಲ್ಲ ಬೇರೆ ಬೇರೆ ಆಗಿ ಅವರವರ ಕನಸಿನ ಹಿಂದೆ ಹೋಗೋ ಟೈಮ್ ಅದು. ಕೆಲವರಿಗೆ PG ಮಾಡೋ ಆಸೆ, ಕೆಲವರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡೋ ಛಲ, ಇನ್ನೂ ಉಳಿದವರಿಗೆ ಅಪ್ಪ ಹೆಲ್ದಂಗೆ ಇರೋ ಬಿಸಿನೆಸ್ ನೋಡಿಕೊಂಡ ಹೋಗೋ ಅವಕಾಶ, ಇದ್ಯಾವದು ಇಲ್ದೊರಿಗೆ ಇದ್ದದ್ದು ಒಂದೇ ದಾರಿ , ಅದು “ನಮ್ಮ ಬೆಂಗಳೂರು” ಮಾತ್ರ!! ಅವರು ಯಾರೇ ಆಗಿರಲಿ, ಏನೇ ಮಾಡಲಿ, ಎಲ್ಲಿಂದನಾದ್ರು ಬರಲಿ ಬೆಂಗಳೂರು ಎಲ್ಲರಿಗೂ ಕೈ ಚಾಚಿ ಕರೆದು,ಅವಕಾಶ ಕೊಟ್ಟು ಬದುಕೋ ಧೈರ್ಯ ಕೊಡ್ತಿತ್ತು, ಈಗಲೂ ಕೊಡ್ತಿದೆ!
- Ravi Kotresh
No comments:
Post a Comment